Home
ಸಮಾಚಾರಗಳು | In the News:
- ದಿನಾಂಕ: 02-04-2012 ರಿಂದ ಕರ್ನಾಟಕ ನಾಗರೀಕ ಸೇವೆಗಳ ಖಾತರಿ ಅಧಿನಿಯಮ-2011 (ಸಕಾಲ) ಯೋಜನೆಯು ಕೊಳ್ಳೇಗಾಲ ನಗರಸಭೆಯಲ್ಲಿ ಜಾರಿಗೆ ಬಂದಿರುತ್ತದೆ.
ಕೊಳ್ಳೇಗಾಲ ಪಟ್ಟಣದ ಬಗ್ಗೆ ಮಾಹಿತಿ:-
- ಕೊಳ್ಳೇಗಾಲ ಪಟ್ಟಣವು ದಿನಾಂಕ: 18/12/2006 ರಂದು ಪುರಸಭೆಯಿಂದ ನಗರಸಭೆಗೆ ಮೇಲ್ದರ್ಜೆಗೇರಿತು.
- ಕೊಳ್ಳೇಗಾಲ ಪಟ್ಟಣವು ಚಾಮರಾಜನಗರ ಜಿಲ್ಲೆಗೆ ಸೇರಿದ್ದು ಜಿಲ್ಲೆಯಿಂದ ಸುಮಾರು 36 ಕಿಲೋಮೀಟರ್ ಅಂತರದಲ್ಲಿದೆ.
- ಕೊಳ್ಳೇಗಾಲ ನಗರಸಭಾ ವ್ಯಾಪ್ತಿಯು ಸುಮಾರು 27.7 ಚದುರ ಕಿಲೋಮೀಟರ್ ಇರುತ್ತದೆ.
- 2001 ರ ಜನಗಣತಿಯ ಪ್ರಕಾರ ಕೊಳ್ಳೇಗಾಲ ಪಟ್ಟಣವು 52,607 ಜನಸಂಖ್ಯೆಯನ್ನು ಹೊಂದಿರುತ್ತದೆ.
- ಕೊಳ್ಳೇಗಾಲ ಪಟ್ಟಣವು ಚಾಮರಾಜನಗರ ಜಿಲ್ಲೆಯಲ್ಲೇ ಅತಿ ದೊಡ್ಡ ತಾಲ್ಲೂಕಾಗಿದ್ದು, ಕೊಳ್ಳೇಗಾಲವನ್ನು ರೇಷ್ಮೆ ನಗರಿ ಎಂದು ಕರೆಯಲಾಗುತ್ತದೆ.
- ಕೊಳ್ಳೇಗಾಲವು ಪ್ರೇಕ್ಷಣೀಯ ಸ್ಥಳವಾಗಿದ್ದು 80 ಕಿ.ಮೀ. ಅಂತರದಲ್ಲಿ ಪ್ರಖ್ಯಾತ ಶ್ರೀ ಮಲೈ ಮಹದೇಶ್ವರ ಬೆಟ್ಟವಿದ್ದು ಪ್ರತಿ ವರ್ಷ ಲಕ್ಷಾಂತರ ಭಕ್ತಾಧಿಗಳು ಶ್ರೀ ಮಲೈ ಮಹದೇಶ್ವರ ದೇವರ ದರ್ಶನ ಪಡೆಯಲು ಬರುತ್ತಾರೆ.
- ಕೊಳ್ಳೇಗಾಲ ತಾಲ್ಲೂಕಿನ ಸತ್ತೆಗಾಲದ ಬಳಿ ಇರುವ ಕಾವೇರಿ ನದಿಯೊಳಗಿನ ದ್ವೀಪ ಸಮೂಹ ಶಿವನಸಮುದ್ರ.
Brief introduction to Kollegala town
The town is the major commercial center of the district. The town is identified as a market-cum-service center for the rural hinterland. The main occupation of the kollegal residents is Silk weaving, Beedi winding and Business. The famous Maradigudda Temple and Makala Mahadeshwara Temple are the religious places. Kollegal is famous for its religious customs and also famous for black magic.
ಗಣಕೀಕರಣ ಯೋಜನೆಗಳ ಬಗ್ಗೆ ಮಾಹಿತಿ:-
ಸ್ಥಳೀಯ ಸಂಸ್ಥೆ ವೆಬ್ ಸೈಟ್: ಕೊಳ್ಳೇಗಾಲ ನಗರಸಭೆಯ ವೆಬ್ ಸೈಟ್ www.kollegalacity.gov.in ಆಗಿದ್ದು ಸಾರ್ವಜನಿಕರು ನಗರಸಭೆಯ ಮಾಹಿತಿಯನ್ನು ವೆಬ್ ಸೈಟ್ ನಲ್ಲಿ ಪಡೆದುಕೊಳ್ಳಬಹುದಾಗಿದೆ.
ಜನನ & ಮರಣ ದಾಖಲಾತಿಯ ಗಣಕೀಕರಣ: ಕೊಳ್ಳೇಗಾಲ ನಗರಸಭೆಯಲ್ಲಿ 1990 ರಿಂದ ಈ ದಿನಾಂಕದವೆರೆಗೆ ಜನನ ಮತ್ತು ಮರಣ ದಾಖಲಾತಿಗಳನ್ನು ಗಣಕೀಕರಣ ಗೊಳಿಸಲಾಗಿದ್ದು, ನಗರಸಭೆಯ ವೆಬ್ ಸೈಟ್ ಮೂಲಕ ಸಾರ್ವಜನಿಕರು ಜನನ ಮತ್ತು ಮರಣ ದಾಖಲಾತಿಗಳನ್ನು ವೀಕ್ಷಿಸಬಹುದು.
ಸಾರ್ವಜನಿಕ ಕುಂದುಕೊರತೆಗಳ ನಿವಾರಣಾ ಘಟಕ: ಕೊಳ್ಳೇಗಾಲ ನಗರಸಭೆಯಲ್ಲಿ ಸಾರ್ವಜನಿಕ ಕುಂದು ಕೊರತೆಗಳ ನಿವಾರಣಾ ಘಟಕವನ್ನು ದಿನಾಂಕ: 05-03-2009 ರಿಂದ ಪ್ರಾರಂಭಿಸಲಾಗಿದೆ. ಸಹಾಯವಾಣಿ ಸಂಖ್ಯೆ-08224-252626
ಆಸ್ತಿ ತೆರಿಗೆ ಗಣಕೀಕರಣ: ಕೊಳ್ಳೇಗಾಲ ನಗರಸಭೆಯಲ್ಲಿ ಆಸ್ತಿ ತೆರಿಗೆ ಗಣಕೀಕರಣಕ್ಕೆ ಸಂಬಂದಿಸಿದಂತೆ ಎಲ್ಲಾ ವಾರ್ಡ್ ಗಳ ಸರ್ವೆ ಕಾರ್ಯ ಮುಗಿದಿದ್ದು, ಆಸ್ತಿಗಳ ವಿವರವನ್ನು ಡಾಟಾ ಎಂಟ್ರಿ ಮಾಡಿಸಲಾಗಿದ್ದು ಪೌರ ಸುದಾರಣಾ ಕೋಶ ಬೆಂಗಳೂರಿಗೆ ಡಾಟಾಬೇಸ್ ಸಲ್ಲಿಸಲಾಗಿದ್ದು, ಶೀಘ್ರದಲ್ಲಿಯೇ ಗಣಕೀಕರಣ ಗೊಳಿಸಲಾಗುವುದು.
ಲೆಕ್ಕ ಪದ್ದತಿ: ಕೊಳ್ಳೇಗಾಲ ನಗರಸಭೆಯಲ್ಲಿ ನಿಧಿಯಾಧರಿತ ಲೆಕ್ಕ ಪದ್ದತಿ (ಖರ್ಚು ವೆಚ್ಚಗಳು) ಯನ್ನು ದಿನಾಂಕ: 30-09-2011 ರವರೆಗೆ ಕಾಲೋಚಿತಗೊಳಿಸಲಾಗಿದೆ. 2010-11 ಸಾಲಿನ ವಾರ್ಷಿಕ ನಿರ್ವಹಣಾ ವರದಿಯನ್ನು ಪೂರ್ಣಗೊಳಿಸಲಾಗಿದೆ.
ಧ್ಯೇಯೋದ್ದೇಶಗಳು:
ನಗರಸಭೆ ವ್ಯಾಪ್ತಿಯೊಳಗಿನ ಎಲ್ಲಾ ಕುಟುಂಬಗಳಿಗೆ ಕುಡಿಯುವ ನೀರಿನ ಸರಬರಾಜು, ಸರಕಾರದ ಎಲ್ಲಾ ಯೋಜನೆಗಳನ್ನು ಜನರಿಗೆ ತಲುಪಿಸುವುದು, ನಗರಸಭೆ ವ್ಯಾಪ್ತಿಯೊಳಗಿನ ಎಲ್ಲಾ ದಾರಿಗಳಿಗೆ ದಾರಿದೀಪ ಅಳವಡಿಕೆ, ಉತ್ತಮ ರೀತಿಯ ಕಸ ಸಂಗ್ರಹಣೆ ಮತ್ತು ವಿಲೇವಾರಿ ಮಾಡಿ ನಗರವನ್ನು ಸುಂದರವಾಗಿಡಿಸುವುದು, ನಗರದ ಶುಚಿತ್ವ ಕಾಪಾಡುವುದು. ಉತ್ತಮ ರೀತಿಯ ರಸ್ತೆ, ಚರಂಡಿಯನ್ನು ಒದಗಿಸಿ ಸಾರಿಗೆ ವ್ಯವಸ್ಥೆಯನ್ನು ಸುಗಮಗೊಳಿಸುವುದು. ಕೆ.ಎಂ.ಆರ್.ಪಿ ಯೋಜನೆಯಡಿ ಸುಧಾರಣೆಗೊಳ್ಳುತ್ತಿರುವ ಗಣಕೀಕರಣ ಯೋಜನೆಗಳಾದ ಜನನ-ಮರಣ ನೋಂದಣಿ, ದೂರು ನಿವಾರಣಾ ಘಟಕ, ನಗರಸಭೆಯ ವೆಬ್ ಸೈಟ್, ಗಣಕೀಕೃತ ಆಸ್ತಿ ತೆರಿಗೆ ಯೋಜನೆಯ ಮೂಲಕ ಜನರಿಗೆ ಉತ್ತಮ ಸೇವೆ ಹಾಗೂ ಪಾರದರ್ಶಕ ಆಡಳಿತವನ್ನು ನೀಡುವುದು.
Click here for Kollegal City Water Supply Nodal officer details
| This page is maintained by: Sri Cheluvarajaswamy, Manager |
Last Updated : 21-03-2013 |

